ಯಶೋಗಾಥೆ

 ನಮ್ಮ ಶಾಲೆಯ ಮೊದಲ ಹೆಜ್ಜೆಯ ಪ್ರಗತಿಯನ್ನು ಪದಗಳಲ್ಲಿ ಮೂಡುವಂತೆ ಪ್ರೇರೇಪಣೆ ನೀಡಿದ, ಸಹಕರಿಸಿದ,ಮಾರ್ಗದರ್ಶನ ನೀಡಿದಂತಹ ನಮ್ಮ ಡಯಟ್ ನ ಪ್ರಾಂಶುಪಾಲರಾದ ಶ್ರೀಮತಿ ಪುಷ್ಪಲತಾ ಮೇಡಂ ರವರಿಗೆ ಹಾಗೂ ಶ್ರೀಯುತ  ಫಣೀಶ್ ಸರ್ ,ಉಪಪ್ರಾಂಶುಪಾಲರಿಗೂ ಈ ಮೂಲಕ ನುಡಿ ನಮನಗಳನ್ನು ಸಲ್ಲಿಸುತ್ತೇನೆ.
ಹಾಸನ ಜಿಲ್ಲೆಯ,ಅರಸೀಕೆರೆ ತಾಲೂಕಿನ, ಬಾಗೇಶಪುರ ಕ್ಲಸ್ಟರ್ ನ ಬಸ್ ಸಂಚಾರದಿಂದ ವಂಚಿತವಾದ ಒಂದು ಪುಟ್ಟ ಹಳ್ಳಿಯ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಪ್ಪೇನಹಳ್ಳಿ.
2019ನೇ ಸಾಲು ನಮ್ಮ ದೇಶಕ್ಕೆ covid-19  ಪಿಡುಗಿನ ಕಾಲ ನಮ್ಮ ಶಾಲೆಗೆ ಧನಾತ್ಮಾಕ ಬದಲಾವಣೆಯ ಪರ್ವ ಕಾಲ. ನಮ್ಮ ಶಾಲೆ ಯಲ್ಲಿ 1ರಿಂದ 7ನೇ ತರಗತಿಯ ವರೆಗೆ 31 ಮಕ್ಕಳು ಅಭ್ಯಸಿಸುತ್ತಿದ್ದಾರೆ.ನಮ್ಮದು ಚಿಕ್ಕ ಹಿರಿಯ ಪ್ರಾಥಮಿಕ ಶಾಲೆ ಅಂದರೆ ಕೇವಲ ಮೂರು ಕೊಠಡಿಗಳನ್ನು ಒಳಗೊಂಡಿದೆ.ಆಟದ ಮೈದಾನವಿಲ್ಲ,ಮಕ್ಕಳು ಪ್ರಾರ್ಥನೆಗೆ ನಿಲ್ಲಲು ಸಮರ್ಪಕ ಸ್ಥಳಾವಕಾಶವಿಲ್ಲ,ಕೊಠಡಿಗಳು ಸುಸ್ಥಿತಿಯಲಿಲ್ಲ, ಪಿಠೋಪಕರಣಗಳ ಅಲಭ್ಯತೆಯೂ,ಗೈರುಹಾಜರಿಯೂ ಕಾಡುತ್ತಿತ್ತು.
ಇವುಗಳನ್ನೆಲ್ಲಾ ಮೀರಿ ಶಾಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಬೇಕೆಂಬ ಮಳೆ ಮೋಡಗಳು ರೂಪಗೊಂಡವು.Dreams transform into thoughts and thoughts results in action.ಆದ್ರೆ ನಮ್ಮ ಕ್ರಿಯಾ ಯೋಜನೆ ಬಹುವಾರ್ಷಿಕದಾಗಿದ್ದವು.ಆದರೆ ಅದರತ್ತ ಸಾಗಲು ಚಿಕ್ಕ ಚಿಕ್ಕ ಹೆಜ್ಜೆಯ ಅವಶ್ಯಕತೆ ಇದೆ ಎಂಬುದನ್ನು ಮನಗೊಂಡ ನಾವು ಮೊದಲು ಗೈರು ಹಾಜರಿಯ ಕಡೆ ಗಮನ ಹರಿಸಿದೆವು.ಮೊದಮೊದಲು ಪೋಷಕರ ವಿರೋಧ ವ್ಯಕ್ತವಾಯಿತು.ನಮ್ಮ ಮನವರಿಕೆಯ ಮಾತುಗಳು ಪೋಷಕರಲ್ಲೂ ಮನಪರಿವರ್ತನೆ ಮಾಡಿದೆವು.ಪ್ರಸ್ತುತ ನಮ್ಮ ಶಾಲೆಯಲ್ಲಿ 99% ಹಾಜರಾತಿ ಪ್ರತಿ ದಿನ ಗಮನಿಸಬಹುದು.
ಇದರ ಯಶಸ್ಸಿನ ನಂತರ ನಾವು ಗಮನ ನೀಡಿದ್ದು ಶಾಲೆಯ ಭೌತಿಕ ಸವಲತ್ತಿನ ಕಡೆ.ಅದರ ಪರಿಣಾಮವಾಗಿ ಶ್ರೀಯುತ ವಿಷ್ಣುವರ್ಧನ್ ರವರು ,ನಿಕಟ ಪೂರ್ವ ಪ್ರಭಾರಿ ಮುಖ್ಯ ಶಿಕ್ಷಕರು ಶಾಲೆಗೆ ಸುಣ್ಣ ಬಣ್ಣದ ಅಲಂಕಾರದ ವ್ಯವಸ್ಥೆ ಮಾಡಿದರು.ನಾನು ಮತ್ತು ಶ್ರೀಮತಿ ಕವಿತ ಪ್ರಸ್ತುತ ಪ್ರಭಾರಿ ಮುಖ್ಯ ಶಿಕ್ಷಕರು ಹಾಗೂ ನಮ್ಮ ಶಾಲಾ ಮಕ್ಕಳೆಲ್ಲ ಸೇರಿ ಹೊರಗೋಡೆಗಳನ್ನು ಕಲಿಕಾಂಶಗಳಿಂದ ಸಿಂಗರಿಸಿದೆವು.ಇದರಲ್ಲಿ ಶ್ರೀಯುತ ವಿಷ್ಣುವರ್ಧನ್ ರವರ ಕಲಾಸಿರಿ ಅನಾವರಣಗೊಂಡಿತು. ವಿಷಯವಾರು,ತರಗತಿವಾರು, ಕಲಿಕಾ ಫಲಗಳ flex ನ್ನು ತರಗತಿಕೋಣೆಗಳಿಗೆ ಹಾಕಲಾಗಿದೆ. 
 ಶ್ರೀಯುತ ವಿಷ್ಣುವರ್ಧನ್ ರವರು crp ಆಗಿ ಕರ್ತವ್ಯ ನಿರ್ವಹಿಸಲು ತೆರಳಿದರು. ಈಗ ನಾವಿಬ್ಬರೇ ಶಾಲೆಯಲ್ಲಿ ಕಾರ್ಯ ನಿರ್ವಹಿಸುವುದು ದೊಡ್ಡ ಸವಾಲಾಯಿತು. ಆ ಸವಾಲುಗಳನ್ನು ಇಬ್ಬರೇ ಎದುರಿಸಿಕೊಂಡು ನಮ್ಮ ಕನಸುಗಳನ್ನು ಮುಂದುವರೆಸಿದೆವು.  ಮಕ್ಕಳಲ್ಲಿ ಸಮಾನತೆ, ಸಮಾನ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ 2020-21ರಿಂದ ದಾನಿಗಳ ಸಹಕಾರದೊಂದಿಗೆ ವರ್ಷಪೂರ್ತಿ ಬೇಕಾಗುವ ನೋಟ್ ಬುಕ್, ಪೆನ್ಸಿಲ್, ಪೆನ್ನು, ಗಣಿತದ ಜ್ಯಾಮಿಟ್ರಿಯ ಉಪಕರಣಗಳನ್ನು ಜೂನ್ ತಿಂಗಳಿನಲ್ಲೆ ನೀಡಲಾಗುತ್ತಿದೆ. ಇದು ಮಕ್ಕಳ ಕಲಿಕೆಗೆ ಉಂಟಾಗಬಹುದಾದ ತೊಡಕನ್ನು ನಿವಾರಿಸಿತು. ಮಕ್ಕಳು ಶಿಸ್ತು, ಸ್ವಚ್ಛತೆಯನ್ನು ರೂಢಿಸಿಕೊಳ್ಳುವಂತೆ ಮಾಡಲಾಯಿತು. ಅದರ ಪ್ರತಿಫಲನವಾಗಿ ದಾನಗಳಿಂದ ನಮ್ಮ ಮಕ್ಕಳಿಗೆ ಉಚಿತ Track suites, tie,belt, I'd cardಗಳನ್ನು ನೀಡಲಾಯಿತು. ಈಗ ಪೋಷಕರಿಂದ ಮೆಚ್ಚುಗೆಯ ಮಾತುಗಳನ್ನು ಕೇಳುತ್ತಿದ್ದೆವೆ.ಜೊತೆಗೆ ನಮ್ಮ ಮಕ್ಕಳು ಯಾವ ಖಾಸಗಿ ಶಾಲಾ ಮಕ್ಕಳಿಗಿಂತ ಕಡಿಮೆ ಇಲ್ಲದಂತಾಗಿದೆ. ಪ್ರತಿದಿನ ಪ್ರಾರ್ಥನೆಯಲ್ಲಿ ಮಕ್ಕಳು ಶಾಲಾ ಪಚಾಂಗ, ಸುಭಾಷಿತ,Thought for the day, ಪುಸ್ತಕ ಪರಿಚಯ, ವಾರಕ್ಕೊಂದು ಪ್ರಯೋಗ, ದಿನಕ್ಕೊಂದು ಪ್ರಶ್ನೆ ಇವೆಲ್ಲವನ್ನೂ ರೂಪಸಿದೆವು.ಈಗ ಮಕ್ಕಳೆಲ್ಲ ಸ್ವತಂತ್ರವಾಗಿ ಈ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾರೆ.    
 ಶಾಲೆಯ ಯಾವುದೇ ಕಾರ್ಯಕ್ರಮಗಳಲ್ಲೂ ಮಕ್ಕಳೆ ನಿರೂಪಣೆ, ಸ್ವಾಗತ, ಪ್ರಾರ್ಥನೆ, ವಂದನಾರ್ಪಣೆಯಂತಹ
 ವೇದಿಕೆ ಕಾರ್ಯಕ್ರಮವನ್ನು ನಿರ್ವಹಿಸುತ್ತಾರೆ.ಈ ವಿಷಯ ಪೋಷಕರಲ್ಲೂ ಬಹಳ ಸಂತಸ ತಂದಿದೆ.ನಮ್ಮ ಮಕ್ಕಳು ಸ್ವತಂತ್ರವಾಗಿ ನಾಲ್ಕಾರು ಜನರ ಮುಂದೆ ಧೈರ್ಯವಾಗಿ ಮಾತನಾಡಬಲ್ಲವರು ಎಂಬುದು ಅವರಿಗೆ ಹೆಮ್ಮೆಯ ವಿಚಾರ.  ಇವುಗಳ ನಡುವೆ ನಾನು ಮತ್ತು ನಮ್ಮ ಪ್ರಭಾರಿ ಮುಖ್ಯ ಶಿಕ್ಷಕರು ಸರ್ಕಾರದ ಉಚಿತ ಸವಲತ್ತುಗಳಾದ ಎರಡು ಜೊತೆ ಸಮವಸ್ತ್ರ, ಶೂ ಸಾಕ್ಸ್, ಪಠ್ಯಪುಸ್ತಕಗಳು, ಬಿಸಿ ಊಟ,ಕ್ಷೀರಭಾಗ್ಯ, ಮೊಟ್ಟೆ ವಿತರಣೆ ಇವುಗಳನ್ನು ಸಕಾಲದಲ್ಲಿ ಇಲಾಖೆ ನಿಯಮಾನುಸಾರ ಮಕ್ಕಳಿಗೆ ಒದಗಿಸುತ್ತಿದ್ದೆವೆ.  ಕಳೆದ ಬಾರಿಯ ಮಳೆಯಿಂದಾಗಿ 2ಕೊಠಡಿಗಳು ಬಳಸಲು ಯೋಗ್ಯವಲ್ಲದಂತಾಯಿತು.ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಯುತ ರಮೇಶ್ ರವರ ಸಹಕಾರದೊಂದಿಗೆ 4 ಲಕ್ಷ ಅನುದಾನ ಬಿಡುಗಡೆಯಾಗಿ2 ಕೊಠಡಿಗಳ ಮೇಲ್ಛಾವಣಿ ದುರಸ್ಥಿ ಕಾರ್ಯವನ್ನು ಯಶಸ್ವಿಯಾಗಿ ನಮ್ಮ ಮುಖ್ಯ ಶಿಕ್ಷಕರ ಮೇಲುಸ್ತುವಾರಿಯಲ್ಲಿ ನಡೆದು ನಿಟ್ಟುಸಿರು  ಬಿಡುವಂತಾಗಿದೆ.
ಆಟದ ಮೈದಾನದ ಅಲಭ್ಯತೆಯಲ್ಲಿಯೂ ದೇವಸ್ಥಾನದ ಜಾಗದಲ್ಲಿ, ರಸ್ತೆ ಬದಿಯಲ್ಲಿ ಮಕ್ಕಳಿಗೆ ಆಟೋಟಗಳನ್ನು ನಡೆಸಿ ಕ್ರೀಡಾಕೂಟದಲ್ಲೂ ಭಾಗವಹಿಸುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಕ್ಕಳಲ್ಲಿ ಹಾಡುಗಾರಿಕೆ, ನಟನೆಯಲ್ಲಿ,ವಾಕ್ಚಾತುರ್ಯ್ಯಗಳನ್ನು ಬೆಳೆಸುವ ವಾತಾವರಣವನ್ನು ಕಲ್ಪಿಸಲಾಗುತ್ತಿದೆ.ಮಕ್ಕಳು ಪ್ರತಿಭಾ ಕಾರಂಜಿ ಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.   
 ನಮ್ಮ crpಸರ್ ರವರಾದ ಶ್ರೀಯುತ ಮಂಜುನಾಥಚಾರ್ಯ ಸರ್ ರವರ ಚಿಂತನೆಯ ಕಾರಣದಿಂದಾಗಿ ನಾವು ನಲಿಕಲಿ ಘಟೀಕೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದು,ರಾಜ್ಯದಲ್ಲಿಯೇ ಪ್ರಥಮ ಎಂಬುದು ನಮಗೆ ಹೆಗ್ಗಳಿಕೆಯ  ಸಂಗತಿ.  Laptop ಬಳಸಿ ಮಕ್ಕಳಿಗೆ ಪಠ್ಯ ಬೋಧನೆ, computer ಜ್ಞಾನ, ಅನುಭವಾತ್ಮಕ ಕಲಿಕೆ,ಪ್ರಯೋಗಾತ್ಮಕ ಕಲಿಕೆ,ಸಂತಸದಾಯಕ ಕಲಿಕೆಯಲ್ಲಿ  ಹೆಚ್ಚು ಗಮನ ನೀಡಲಾಗುತ್ತಿದೆ.   ಇಲಾಖೆಯ  ಓದು ಆಂದೋಲನ, ಓದು ಕರ್ನಾಟಕ, ವಿದ್ಯಾಗಮ,ಮಳೆ ಬಿಲ್ಲು,ವಿದ್ಯಾಪ್ರವೇಶ, ಸೇತುಬಂಧ,ENK,Inspire award, ಸಂಭ್ರಮ ಶನಿವಾರ, FLNಮಾಸಾಚರಣೆ ಹಾಗೂ ಭಾಷಾಮಾಸಾಚರಣೆ 
 ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಇಲಾಖೆಯ ಆಶಯದಂತೆನಡೆಸಲಾಗುತ್ತಿದೆ .ಶಾಲಾ ಹಂತದ ಕಲಿಕಾ ಹಬ್ಬವನ್ನು ಆಯೋಜಿಸಿದ್ದು, ಇದರಲ್ಲಿ  ನಮ್ಮ ಮಕ್ಕಳೆ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ.
          

ಇನ್ನೂ ಬಹಳಷ್ಟು ಕಾರ್ಯಗಳು ಆಗಬೇಕಿದೆ ಹಾಗಾಗಿ ಇಲ್ಲಿ ನಾನು ಮೊದಲ ಹೆಜ್ಜೆ ಯ ಪರಿಚಯ ಮಾಡಿರುವೆ. Never stop dreaming , think big,believe bigand the result  will be big ಅನ್ನುವಂತೆ ಸಾಗಲು ಸಾಕಷ್ಟಿದೆ. 
ಈಗಿನ ಹೆಜ್ಜೆ ಗೆ
 ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ. ,ಸ್ಫೂರ್ತಿಯನ್ನು, ವಿಶ್ವಾಸವನ್ನು, ಸೂಕ್ತ  ಮಾರ್ಗದರ್ಶನ  ನೀಡುತ್ತಿರುವ 
*ಶ್ರೀಯುತ ಮೋಹನ್  ಕುಮಾರ್, B.Eo,ಅರಸೀಕೆರೆ
*ಶ್ರೀಯುತ ಶಂಕರ್,  BRC,ಅರಸೀಕೆರೆ 
*ಶ್ರೀಯುತ ಚಿದಾನಂದ್, E.Co,ಕಸಬಾ2,ಅರಸೀಕೆರೆ 
*ಶ್ರೀಯುತ ಸಿದ್ದರಾಮಪ್ಪ, BRP,ಕಸಬಾ2,ಅರಸೀಕೆರೆ 
*ಶ್ರೀಯುತ ಮಂಜುನಾಥಚಾರ್ಯ, CRP,ಬಾಗೇಶಪುರ
ಇವರಿಗೆ ಶಾಲಾ ಪರವಾಗಿ ವೈಯಕ್ತಿಕವಾಗಿ ವಂದನೆಗಳು 
You have to dream before your dream can come true. 

Comments

Post a Comment

Popular posts from this blog

ನಲಿಕಲಿ ಘಟೀಕೋತ್ಸವ