ನಲಿಕಲಿ ಘಟೀಕೋತ್ಸವ

ನಲಿಕಲಿ ಘಟೀಕೋತ್ಸವದ ಅಭಿನಂದನಾ ಪತ್ರ

 ಸರ್ಕಾರಿ ಶಾಲೆಗಳಲ್ಲಿ ನಲಿಕಲಿ ವಿಭಾಗವು ಕಲಿಕೆಯಲ್ಲಿ ವಿಭಿನ್ನತೆಯನ್ನು ಹೊಂದಿದೆ. ಈ ಘಟ್ಟದಿಂದ ಮುಂದಿನ ತರಗತಿಯ ವಿಭಿನ್ನ ಮಾದರಿಯ ಕಲಿಕೆಗೆ ಹೋಗುವ ಮಕ್ಕಳಿಗೆ ಒಂದು ಪ್ರೋತ್ಸಾಹ ನೀಡುವ ಆಶಯದೊಂದಿಗೆ ಚಿಗುರೊಡೆದಿರುವುದೆ ನಮ್ಮ ಈ ನಲಿಕಲಿ ಘಟೀಕೋತ್ಸವ. ಈ ಒಂದು ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಕಾರಣಿ ಕರ್ತೃ ನಮ್ಮ  crpಸರ್ ಆದಂತಂಹ ಶ್ರೀಯುತ ಮಂಜುನಾಥಚಾರ್ಯ ರವರು. ಈ ಮೂಲಕ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಈ ಕಾರ್ಯಕ್ರಮದ ರೂಪುರೇಷೆಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದಂತಹ ನಮ್ಮ ಹೆಮ್ಮೆಯ ಡಯಟ್ ನ ಉಪಪ್ರಾಂಶುಪಾಲರೂ, ನಲಿಕಲಿ ಬ್ರಹ್ಮ ಎಂದು ಬಿರುದಾಂಕಿತರೂ, ಹಾಸನ ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ರೂವರಿಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀಯುತ ಫನೀಶ್ ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೂ, sdmc ಯವರಿಗೂ ಮತ್ತು ಗ್ರಾಮಸ್ಥರಿಗೂ ಧನ್ಯವಾದಗಳು.ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. 💐💐💐

ಮಕ್ಕಳ ಸಂಭ್ರಮವನ್ನು ನೋಡಿ ಶಾಲಾ ವಾತಾವರಣವು ಸಂಭ್ರಮಿಸುತ್ತಿತ್ತು.ಮಕ್ಕಳು mic ಹಿಡಿದುಕೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಾಗ ಪೋಷಕರಿಗೆ ಅದೇನೋ ಹೆಮ್ಮೆಯ ಭಾವನೆ. ಪೋಷಕರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು,ಇದೊಂದು ಉತ್ತಮ ಪ್ರೋತ್ಸಾಹದಾಯಕ ಕಾರ್ಯಕ್ರಮ ಎಂದು ಅಭಿಪ್ರಾಯ ಹಂಚಿಕೊಂಡದ್ದು ನಮಗೆ ಸ್ಪೂರ್ತಿದಾಯಕ ಘಳಿಗೆಯೇ ಸರಿ.ಇನ್ನೂ ಕೆಲ ಪೋಷಕರು ಕಳೆದ ಸಾಲಿನಲ್ಲಿ ಮಾಡಬೇಕಿತ್ತು,ಮುಂದಿನ ವರ್ಷವೂ ಮಾಡಿ ಎಂತಲೂ,ಹಿರಿಯ ವಿದ್ಯಾರ್ಥಿಗಳು ನಾವು ಇದರಿಂದ ವಂಚಿತರಾದೆವಲ್ಲಾ ಎಂದು ಹೇಳಿದ್ದು ನಮ್ಮಲ್ಲಿ ಒಂದು ಹೆಮ್ಮೆಯ ಭಾವ. ಮತ್ತೊಮ್ಮೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

Comments

Popular posts from this blog

ಯಶೋಗಾಥೆ