Posts

ಯಶೋಗಾಥೆ

Image
 ನಮ್ಮ ಶಾಲೆಯ ಮೊದಲ ಹೆಜ್ಜೆಯ ಪ್ರಗತಿಯನ್ನು ಪದಗಳಲ್ಲಿ ಮೂಡುವಂತೆ ಪ್ರೇರೇಪಣೆ ನೀಡಿದ, ಸಹಕರಿಸಿದ,ಮಾರ್ಗದರ್ಶನ ನೀಡಿದಂತಹ ನಮ್ಮ ಡಯಟ್ ನ ಪ್ರಾಂಶುಪಾಲರಾದ ಶ್ರೀಮತಿ ಪುಷ್ಪಲತಾ ಮೇಡಂ ರವರಿಗೆ ಹಾಗೂ ಶ್ರೀಯುತ  ಫಣೀಶ್ ಸರ್ ,ಉಪಪ್ರಾಂಶುಪಾಲರಿಗೂ ಈ ಮೂಲಕ ನುಡಿ ನಮನಗಳನ್ನು ಸಲ್ಲಿಸುತ್ತೇನೆ. ಹಾಸನ ಜಿಲ್ಲೆಯ,ಅರಸೀಕೆರೆ ತಾಲೂಕಿನ, ಬಾಗೇಶಪುರ ಕ್ಲಸ್ಟರ್ ನ ಬಸ್ ಸಂಚಾರದಿಂದ ವಂಚಿತವಾದ ಒಂದು ಪುಟ್ಟ ಹಳ್ಳಿಯ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಪ್ಪೇನಹಳ್ಳಿ. 2019ನೇ ಸಾಲು ನಮ್ಮ ದೇಶಕ್ಕೆ covid-19  ಪಿಡುಗಿನ ಕಾಲ ನಮ್ಮ ಶಾಲೆಗೆ ಧನಾತ್ಮಾಕ ಬದಲಾವಣೆಯ ಪರ್ವ ಕಾಲ. ನಮ್ಮ ಶಾಲೆ ಯಲ್ಲಿ 1ರಿಂದ 7ನೇ ತರಗತಿಯ ವರೆಗೆ 31 ಮಕ್ಕಳು ಅಭ್ಯಸಿಸುತ್ತಿದ್ದಾರೆ.ನಮ್ಮದು ಚಿಕ್ಕ ಹಿರಿಯ ಪ್ರಾಥಮಿಕ ಶಾಲೆ ಅಂದರೆ ಕೇವಲ ಮೂರು ಕೊಠಡಿಗಳನ್ನು ಒಳಗೊಂಡಿದೆ.ಆಟದ ಮೈದಾನವಿಲ್ಲ,ಮಕ್ಕಳು ಪ್ರಾರ್ಥನೆಗೆ ನಿಲ್ಲಲು ಸಮರ್ಪಕ ಸ್ಥಳಾವಕಾಶವಿಲ್ಲ,ಕೊಠಡಿಗಳು ಸುಸ್ಥಿತಿಯಲಿಲ್ಲ, ಪಿಠೋಪಕರಣಗಳ ಅಲಭ್ಯತೆಯೂ,ಗೈರುಹಾಜರಿಯೂ ಕಾಡುತ್ತಿತ್ತು. ಇವುಗಳನ್ನೆಲ್ಲಾ ಮೀರಿ ಶಾಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಬೇಕೆಂಬ ಮಳೆ ಮೋಡಗಳು ರೂಪಗೊಂಡವು.Dreams transform into thoughts and thoughts results in action.ಆದ್ರೆ ನಮ್ಮ ಕ್ರಿಯಾ ಯೋಜನೆ ಬಹುವಾರ್ಷಿಕದಾಗಿದ್ದವು.ಆದರೆ ಅದರತ್ತ ಸಾಗಲು ಚಿಕ್ಕ ಚಿಕ್ಕ ಹೆಜ್ಜೆಯ ಅವಶ್ಯಕತೆ ಇದೆ

ಸಾಹಿತ್ಯ ಲೋಕ

Image

ನಲಿಕಲಿ ಘಟೀಕೋತ್ಸವ

Image
ನಲಿಕಲಿ ಘಟೀಕೋತ್ಸವದ ಅಭಿನಂದನಾ ಪತ್ರ  ಸರ್ಕಾರಿ ಶಾಲೆಗಳಲ್ಲಿ ನಲಿಕಲಿ ವಿಭಾಗವು ಕಲಿಕೆಯಲ್ಲಿ ವಿಭಿನ್ನತೆಯನ್ನು ಹೊಂದಿದೆ. ಈ ಘಟ್ಟದಿಂದ ಮುಂದಿನ ತರಗತಿಯ ವಿಭಿನ್ನ ಮಾದರಿಯ ಕಲಿಕೆಗೆ ಹೋಗುವ ಮಕ್ಕಳಿಗೆ ಒಂದು ಪ್ರೋತ್ಸಾಹ ನೀಡುವ ಆಶಯದೊಂದಿಗೆ ಚಿಗುರೊಡೆದಿರುವುದೆ ನಮ್ಮ ಈ ನಲಿಕಲಿ ಘಟೀಕೋತ್ಸವ. ಈ ಒಂದು ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಕಾರಣಿ ಕರ್ತೃ ನಮ್ಮ  crpಸರ್ ಆದಂತಂಹ ಶ್ರೀಯುತ ಮಂಜುನಾಥಚಾರ್ಯ ರವರು. ಈ ಮೂಲಕ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಈ ಕಾರ್ಯಕ್ರಮದ ರೂಪುರೇಷೆಗಳಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದಂತಹ ನಮ್ಮ ಹೆಮ್ಮೆಯ ಡಯಟ್ ನ ಉಪಪ್ರಾಂಶುಪಾಲರೂ, ನಲಿಕಲಿ ಬ್ರಹ್ಮ ಎಂದು ಬಿರುದಾಂಕಿತರೂ, ಹಾಸನ ಜಿಲ್ಲೆಯ ಶೈಕ್ಷಣಿಕ ಪ್ರಗತಿಯ ರೂವರಿಗಳಲ್ಲಿ ಮುಂಚೂಣಿಯಲ್ಲಿರುವ ಶ್ರೀಯುತ ಫನೀಶ್ ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೂ, sdmc ಯವರಿಗೂ ಮತ್ತು ಗ್ರಾಮಸ್ಥರಿಗೂ ಧನ್ಯವಾದಗಳು.ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. 💐💐💐 ಮಕ್ಕಳ ಸಂಭ್ರಮವನ್ನು ನೋಡಿ ಶಾಲಾ ವಾತಾವರಣವು ಸಂಭ್ರಮಿಸುತ್ತಿತ್ತು.ಮಕ್ಕಳು mic ಹಿಡಿದುಕೊಂಡು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವಾಗ ಪೋಷಕರಿಗೆ ಅದೇನೋ ಹೆಮ್ಮೆಯ ಭಾವನೆ. ಪೋಷಕರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು,ಇದೊಂದು ಉತ್ತಮ ಪ್ರೋತ್ಸ